
ನನ್ನಲ್ಲಿ ಯೇಸು:
ದೇವರ ವಾಕ್ಯಾವ ಆಲಿಸಿ, ಪಾಲಿಸಿ, ಪಡೆದುಕೊಂಡೆ ನಿಜ ದೇವನ ಈ ಬಾಳಿನಲ್ಲಿ
ನನ್ನ ಬಾಳಿನಲ್ಲಿ ಯೇಸು :
ಆತ್ಮರ ಕೃಪೆ ವರದಾನಗಳಿಂದ ಸಾರುವೆ ಕ್ರಿಸ್ತನನು ನನ್ನ ನಡೆ ನುಡಿಯಿಂದ ಈ ಜಗದಿ
ನಾ ನಡೆಯುವ ಹಾದಿಯಲ್ಲಿ ಯೇಸು :
ಪಾಪವೆಂಬ ಮುಳ್ಳಿಂದ ರಕ್ಷಿಸಿ ನಿತ್ಯ ಜೀವದೆಡೆಗೆ ದಾರಿ ತೋರಿದ ಏಕೈಕ ರಕ್ಷಕನಾತ.
ನಾ ಕಂಡೆ ಪರರಲ್ಲಿ ಯೇಸುವ :
ಸರ್ವರ ಹೃದಯಲ್ಲಿ ನೆಲೆಸುವನಾತ
ನಾ ಹಾಡುವ ಗೀತೆಯಲ್ಲಿ :
ಜೈಕಾರ, ಸ್ತುತಿ , ಆರಾಧನೆ ಮಹಿಮೆ ಗೀತೆ ಆತನ ನಾಮಕ್ಕೆ ಎಂದೆಂದಿಗೂ.
ನನ್ನ ಬಾಳಿಗೆ ಬೆಳಕಾದ ಯೇಸು:
ಪಾಪವೆಂಬ ಕತ್ತಲಿನಿಂದ ಹೊರ ಬರಲು ವಾಕ್ಯವ ಕಳುಹಿಸಿ ನನ್ನ ಬಾಳನ್ನು ಬೆಳಗಿಸಿದ ಜಗಜ್ಯೋತಿ ಆತ
ನನ್ನ ನಿಜ ಸೃಷ್ಠಿ ಕರ್ತ ಯೇಸು :
ತನ್ನಂತೆಯೇ ರೂಪಿಸಿ, ಶ್ವಾಸ ನೀಡಿ ಸೃಷ್ಠಿಸಿಹನು ತನ್ನ ನಾಮ ಸಾರಲು ಈ ಜಗದಿ......
By : VB