ಕೊರೋನ ವೈರಸ್ ನಿಯಂತ್ರಣಕ್ಕಾಗಿ ಪ್ರಾರ್ಥನೆ.
ಸರ್ವ ಸೃಷ್ಟಿಯ ಮೇಲೆ ಪ್ರೀತಿ ತೋರುವ ಸರ್ವಶಕ್ತ ಮತ್ತು ದಯವಂತ ದೇವರೆ, ವಿಶ್ವದ ವಿವಿದೆಡೆಗಳಲ್ಲಿ ಕೊರೋನ ಸೋಂಕಿನಿಂದ ಬಲಿಪಶುಗಳಾದವರಿಗಗಿ ನಾವು ಮಾಡುವ ದೀನ ಪ್ರಾರ್ಥನೆಯನ್ನು ಕರುಣೆಯಿಂದ ಆಲಿಸಿರಿ ,
ಶೀಘ್ರವೇ ಈ ಮಹಮಾರಿಯನ್ನು ನಿಯಂತ್ರಿಸುವಂತೆಯು ಈ ಖಾಯೆಲೆಗೆ ತುತ್ತಾದವರಿಗಾಗಿಯು ಬಲಿಪಶುಗಳಾದವರಿಗಾಗಿಯು ಮತ್ತು ಅವರ ಕುಟುಂಬದವರಿಗಾಗಿಯು ಪ್ರಾರ್ಥಿಸುತ್ತಾ ನಿಮ್ಮ ಬಳಿ ಬಂದಿದ್ದೇವೆ,
ಎಲ್ಲಾ ಶುಶ್ರೂಷಕರು, ವ್ಯೆದ್ಯರು, ದಾದಿಯರು ಮತ್ತು ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಎಲ್ಲಾ ಸಿಬ್ಬಂದಿಗಳು ಸೋಂಕಿನಿಂದ ಮುಕ್ತರಾಗಿ ಆತ್ಮಸ್ಥ್ಯರ್ಯದಲ್ಲಿ ಬಲಗೊಳ್ಳುವಂತಾಗಲೆಂದು ನಾವು ಪ್ರಾರ್ಥಿಸುತ್ತೇವೆ. ಈ ರೋಗದ ವಿರುದ್ದ ಹೋರಾಡುವ ಲಸಿಕೆಯ ಸಂಶೋಧನೆಯಲ್ಲಿರುವ ಎಲ್ಲಾ ವಿಜ್ಣಾನಿಗಳು ಶೀಘ್ರವಾಗಿ ಸಫಲತೆಯನ್ನು ಕಾಣುವಂತ್ತೆ ಪ್ರಾರ್ಥಿಸುತ್ತೇವೆ. ಸರ್ಕಾರ ಹಾಗು ಎಲ್ಲಾ ಆರೋಗ್ಯ ಅಧಿಕಾರಿಗಳು ಜನರ ಒಳಿತಿಗಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಲೆಂದು ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಾವಿದನು ಪ್ರಾರ್ಥಿಸುತ್ತೇವೆ ಆಮೆನ್.