Breaking News
Loading...

Info Post







ನೀ ನನ್ನ ಕರೆದೆ ದೇವ, ನಿನ್ನ ಹಿಂದೆ ನಾ ಬಂದೆ ದೇವ (೨),
ಮಾತೆಯ ಗರ್ಭದಲೆ ನನ್ನ ಆರಿಸಿಕೊಂಡೆ (೨),
ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂ, ಹಲ್ಲೆಲೂಯ (೩),
ನನ್ನೇಸುವೆ ನಿಮಗೆ ಸ್ತೋತ್ರ,
ನಿನ್ನ ರಕ್ತದಿಂದ ನನ್ನನ್ನು ತೊಳೆದು (೨),
ಶತಕೋಟಿ ಜನರಲ್ಲಿ ನನ್ನ ಹುಡುಕಿ ನೀ ಕರೆದಿರುವೆ ದೇವ (೨),
ನಿನ್ನ ಸೇವೆಗೆ ನೇಮಿಸಿದೆ ನನ್ನ, ||ಹಲ್ಲೆಲೂಯ||



ರೋಗಿಗೆ ಸೌಖ್ಯವ ಕೊಡಲು, ಬಂಧಿತರಿಗೆ ಬಿಡುಗಡೆಯ ಕೊಡಲು (೨),
ಸೈತಾನನ ಶಕ್ತಿಯ ಅಡಗಿಸಿ ಬಿಡಲು (೨),
ನಿನಗಾಗಿ ಈ ಜೀವ ದೇವ, ಕೊನೆಯುಸಿರು ನಿನಗಾಗಿ ದೇವ (೨),
ಅಭಿಷೇಕವ ಮಾಡಿರುವೆ ನನ್ನ ||ಹಲ್ಲೆಲೂಯ||
ನಿನಗಾಗಿ ನಾ ಓಡುವೆ ||ಹಲ್ಲೆಲೂಯ|| ||ನೀ ನನ್ನ||
ಮುಂದಿಟ್ಟ ಹೆಜ್ಜೆ ಹಿಂದಿಡೆನು ದೇವ (೨),