ಬಾ ಯೇಸುವಲ್ಲಿ ಬಾ, ನಿನ್ನ ಹೃದಯವ ಯೇಸುವಿಗೆ ತಾ, ನಿನ್ನ ಕಾಯುವ ಕುರುಬನವ (೨),
ಹುಟ್ಟಿದಾಗ ಏನು ಹೊತ್ತು ತಂದೆ, ಸತ್ತಾಗೇನು ಕೊಂಡುಹೋಗುವೆ ನೀನು (೨),
ಎಲ್ಲಿಂದ ಬಂದೆ ನೀ ಈ ಜಗಕೆ, ಎಲ್ಲಿ ಹೋಗಬೇಕು ನಿನಗೆ ಗೊತ್ತೆ? (೨) ||ಬಾ ಯೇಸುವಲ್ಲಿ ಬಾ||
ಪ್ರೇಮಕ್ಕಾಗಿ ಅಲೆದು ಸೋತೆ ನೀನು, ನಂಬಿದವರ ಪ್ರೇಮವೆಲ್ಲ ಸುಳ್ಳು (೨),
ಜೀವಕೊಟ್ಟ ಪ್ರೇಮ ಉಂಟು ನೋಡು, ಶಿಲುಬೆ ಮರಣ ಸತ್ಯ ಪ್ರೇಮ ಕಾಣು (೨) ||ಬಾ ಯೇಸುವಲ್ಲಿ ಬಾ||
ಹಣದ ಹಿಂದೆ ಓಡಿದ್ದು ನೀ ಸಾಕು, ಮರಣ ಬರಲು ಹಣವದೆಲ್ಲ ದೂಳು (೨),
ಯೇಸುವಿನ ಹಿಂದೆ ಬೇಗ ಓಡು, ನಿತ್ಯಜೀವ ದಕ್ಕುತ್ತಾಗ ನೋಡು (೨) ||ಬಾ ಯೇಸುವಲ್ಲಿ ಬಾ||
ನಾನು ಎಂಬ ಅಹಂಕಾರ ಸಾಕು, ಆರು ಅಡಿ ಮಣ್ಣು ಕೊನೆಗೆ ನೋಡು (೨),
ಸ್ಥಾನ ಮಾನ ಸ್ಥಿರವಲ್ಲ ನೋಡು, ದೀನರಲ್ಲಿ ಯೇಸುವನ್ನು ಕಾಣು (೨) ||ಬಾ ಯೇಸುವಲ್ಲಿ ಬಾ||